Sunday, November 5, 2017

THE GIFT

There's the sunset, there's the sunrise
There's the new day which brings us a light.
There's the sun who always burn
Embrace the glory and love your term.

We always fought, we always cheated
There's the river which flows for others.
We cursed destiny, we seek self
There's the god who always behind us.

We thought superior, we discriminated
Tall-short, beautiful-ugly, rich-poor, white-black
There is the blood which flows in all

He gave us strength, he gave us wisdom
There's the path which leads to light
There's the life which teaches love
There's the almighty in practiced kindness.

                              -Tilak Bhat 4th Nov 2017 1.35 AM

Sunday, September 25, 2016

ಅದೇ ರಾಗ...

  ಎಲ್ಲೋ ಕಳೆದು ಹೋದ ಬರಹಗಾರನ ಬೆನ್ನಟ್ಟಿ ಓಡುತ್ತಿದ್ದೆ. ಪ್ರತಿದಿನವೂ ಸಂಕಟಗಳು, ಅಕ್ಷರಗಳೆಲ್ಲೋ ಮರೆಯಾಯಿತೆಂಬ ಭೀತಿ. ಸೃಜನಶೀಲ ವ್ಯಕ್ತಿಯೊಬ್ಬ ಅಲ್ಲೆಲ್ಲೋ ಮರೆಯಾದ ಛಾಯೆ. ಓಡಲಾಗದ ಕೈಗಳು. ಕನ್ನಡದ ಸೊಬಗನ್ನು ಮರೆತಿದ್ದೆನಾ?! ಇಲ್ಲ! ಮತ್ತೆ ಬರೆಯಬೇಕೆಂಬ ಬಯಕೆ. ಸರಿ, ಬರೆದೇ ಬಿಡೋಣ.

  ಜಗತ್ತೆಂಬುದು ಯಶಸ್ಸು, ಹಣ, ಅಧಿಕಾರ ಎಂಬುದರ ಹಿಂದೆ ಓಡುತ್ತಿದ್ದರೆ, ಮನಸ್ಸೆಂಬುದು ಶಾಂತಿ, ತೃಪ್ತಿಯ ಕಡೆ ವಾಲುತ್ತಿದೆ. ಅದನ್ನು ಉತ್ಕಟವಾಗಿ ಅಪೇಕ್ಷಿಸುತ್ತಿದೆ. ಎಲ್ಲೊ ನಿಸರ್ಗದ ಮಡಿಲಲ್ಲಿ , ಈ ಭೂರಮೆಯ ಸೇವೆ ಮಾಡುತ್ತ, ಅವಳ ಅಂದ , ಅವಳ ಗಾಂಭೀರ್ಯ , ಅವಳ ಮೃದುತ್ವ , ಅವಳ ಕಠೋರತನವನ್ನು ಹತ್ತಿರದಿಂದ ನೋಡುತ್ತ ಕಳೆದು ಹೋಗಬೇಕೆಂಬ ಬಯಕೆ. ಬಳಸುವ ನೀರಿಗೆ, ತಿನ್ನುವ ಅನ್ನಕ್ಕೆ ಆಗಲೇ ಹಣವ ಕಟ್ಟುತ್ತಿರುವ ನಾವು, ಉಸಿರಾಡುವ ಗಾಳಿಗೂ ಹಣ ಕೊಡುವ ಸಂದರ್ಭ ಬರುವುದರೊಳಗೆ , ಆ ಧರಿತ್ರಿಯ ಮಗುವಾಗಿರಬೇಕು.  ಏಕೆಂದರೆ ಯಾವ ನಾಯಕರೂ , ಯಾವ ಸಾಮಾನ್ಯ ಮನುಷ್ಯರು ಕೂಡ, ಪ್ರಕೃತಿ ಸದ್ದಿಲ್ಲದೇ ತನ್ನೊಳಗೆ ತಾನು ಬದಲಾಗುತ್ತಿರುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮಳೆ ಆಗುತ್ತಿಲ್ಲ. ಮುಂಗಾರು ಮಳೆಯ ಅಬ್ಬರವಿಲ್ಲ.  ಉಷ್ಣವೆಂಬುದು ಜಾಸ್ತಿ. ದಿನನಿತ್ಯ ನಮ್ಮ ಜಂಜಾಟಗಳಲ್ಲೆ ಕಳೆದು ಹೋಗಿರುವ ನಾವು ಗಮನಿಸುತ್ತಿದ್ದೀವಾ? ಮುಂದಿನ ದಿನಗಳಲ್ಲಿ ಮನುಕುಲವು ಹೋರಾಟ ಮಾಡಬೇಕಾಗಿರುವುದು ಭಯೋತ್ಪಾದನೆಯ ವಿಷಯಕ್ಕಲ್ಲ, ಭ್ರಷ್ಟಾಚಾರ ವಿಷಯಕ್ಕೂ ಅಲ್ಲ. ತಮ್ಮ ಧರ್ಮ ಮೇಲು , ಪರಧರ್ಮ ಕೀಳು ಎಂಬ ವಿಷಯಕ್ಕೂ ಅಲ್ಲ. ಹಣ, ಅಂತಸ್ತು, ಐಶ್ವರ್ಯಗಳಿಗಂತಲೂ ಅಲ್ಲವೇ ಅಲ್ಲ. ಕೇವಲ ನಮ್ಮ ಅಸ್ತಿತ್ವಕ್ಕೆ . ಕುಡಿಯುವ ನೀರಿಗೆ ಹಾಗೂ ತಿನ್ನುವ ಅನ್ನಕ್ಕೆ.

   ಬಳಸುವ ನೀರಿಗೆ ಹೇಗೆ ಕೊರತೆ ಎಂದರೆ ಅರ್ಥವಾಗಿರಬಹುದು. ಅರಣ್ಯ ನಾಶ ಹಾಗೂ ಮಳೆಯ ಅಭಾವ. ಇರುವ ಕಾಡನ್ನು ಕಡಿದು , ಇರುವ ಕೆರೆಗಳ ಅತಿಕ್ರಮಿಸಿ , ಜಲ ಮೂಲಗಳ ಮೇಲೆ ಕಾಂಕ್ರೀಟು ಜಂಗಲ್ಲುಗಳು ತಲೆ ಎತ್ತುತ್ತಿವೆ. ಯಾವ ಪುರುಷಾರ್ಥಕ್ಕೆ? ಯಾರ ಬೊಕ್ಕಸಕ್ಕೆ? ಯಾವನದೋ ಬ್ಯಾಂಕ್ ಖಾತೆಗೆ, ಇನ್ಯಾರದೋ ಪೂರ್ತಿ ಖಾಂದಾನು ಕುಳಿತು ತಿನ್ನುವುದಕ್ಕೆ. ನಾವಾದರೋ, ನಮ್ಮ ಮನೆ ಚೆನ್ನಾಗಿದ್ದರೆ ಆಯಿತು, ಪಕ್ಕದ ಮನೆ ಹೊತ್ತಿ ಉರಿದರೆ ನಮಗೇನು ಧಾಡಿ ಎನ್ನುವವರು.

   ತಿನ್ನುವ ಆಹಾರಕ್ಕೆ ಕೊರತೆ ಹೇಗೆ ಗೊತ್ತಾ? ಹೇಗೆಂದರೆ ಬೆಳೆಯುವವರೇ ಇಲ್ಲ! ಬೆಳೆ ಬೆಳೆಯಲಿಕ್ಕೆ ಹೋದರೆ ನೂರಾರು ಕಷ್ಟಗಳು. ಮಳೆಯ ಅಭಾವ, ಕೂಲಿ ಕಾರ್ಮಿಕರ ಅಭಾವ. ಕೆಲಸ ಮಾಡುವುದು ಯಾರಿಗೂ ಬೇಕಿಲ್ಲ. ಇಂದಿನ ಜನರಿಗೆ ಏನೂ ಬೇಡ. ಎಲ್ಲರಿಗು ಒಳ್ಳೆಯ ವಸ್ತ್ರ ಧರಿಸಿ, ಶ್ರೀಮಂತಿಕೆಯ ಕಾರಲ್ಲಿ ಓಡಾಡಿ, ತಮ್ಮದನ್ನು ಎಲ್ಲರಿಗೂ ತೋರಿಸಿಕೊಂಡು , ಉದ್ದವಾಗಿ ರಸ್ತೆಯಲ್ಲಿ ಮೇಲಿಂದ ಕೆಳಗೆ ಓಡಾಡಿ ಬಿಟ್ಟರೆ ಮುಗಿಯಿತು. ನಗರ ಜೀವನದ ಆಕರ್ಷಣೆ. ಹೋಗಲಿ ಬಿಡಿ, ನೀವೇನೋ ಆದರ್ಶವಾದಿಗಳು , ತೋಟಗಳಿಗೆ ಹೋಗಿ , ಭಗೀರಥ ಪ್ರಯತ್ನ ಪಟ್ಟು ದುಡಿದು ಬೆಲೆ ಸಂಪಾದಿಸಿರೆಂದಿಟ್ಟುಕೊಳ್ಳೋಣ, ನೀವು ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ಕೇಳುವವರಿಲ್ಲ. ಇದರರ್ಥ , ಆ ಬೆಳೆಗೆ ಡಿಮಾಂಡ್ ಇಲ್ಲವೆಂದೇನಲ್ಲ! ಈ ಮಧ್ಯವರ್ತಿಗಳು ಅದರ ಬೆಲೆಯನ್ನೆ, ಅದರ ಮೌಲ್ಯವನ್ನೇ ಬೆಳೆದವನಿಗೆ ತೋರಿಸಲ್ಲ. ಬೆಳೆದವನಿಗೆ ಸಿಕ್ಕಿದ್ದು ಸೀರುಂಡೆಯೆ. ಆದರೆ ಅದೇ ಬೆಳೆಯನ್ನು ನೀವು ಖರೀದಿಸಿ ನೋಡಿ , ಅದರ ಮೌಲ್ಯ ದುಪ್ಪಟ್ಟಾಗಿರುತ್ತದೆ. ಆತನ ಅಂಗಡಿ ಬಾಡಿಗೆಯಿಂದ ಹಿಡಿದು , ಎಲ್ಲ ತೆರಿಗೆಗಳನ್ನು ಸೇರಿಸಿ ನೀವು ಖರೀದಿಸಬೇಕಾಗುತ್ತದೆ. ಬೆಳೆದವನ ಜೇಬಲ್ಲೂ ಇಲ್ಲ, ಕೊಂಡವನ ಜೇಬಲ್ಲೂ ಇಲ್ಲ. ಯಾಕೆಂದರೆ ಆ ಮಧ್ಯವರ್ತಿಯ ಲಾಭದಾಸೆ ಇನ್ನೂ ಪೂರೈಸಿಲ್ಲ.

 ನೀವು ಬಗೆ ಹರಿಸುತ್ತೀರಾ? ನಾನು ಬಗೆ ಹರಿಸಲಾ? ಸರಕಾರ ಬಗೆ ಹರಿಸುತ್ತಾ? ಏ! ಇರಲಿ ಬಿಡಿ! ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ಡೊಂಕುಗಳನ್ನು ಸರಿ ಮಾಡಿಕೊಳ್ಳಿ ಅನ್ನುತ್ತೀರಾ? ಬೇಡ, ಇದನ್ನು ಬಗೆ ಹರಿಸೋಣ. Let's solve, let's work for better of this mankind. ಉತ್ಸಾಹಿಯಾಗೋಣ. ಎಲ್ಲರ ಮನೆಯ ಬಟ್ಟಲಲ್ಲೂ ನೆಮ್ಮದಿಯ ಊಟವಿರಲಿ . ಏನನ್ನುತ್ತೀರ?

Sunday, May 4, 2014

ಓದಿದ್ದು

ಒಂದಂತೂ ನಿಜ, ರಾಬಿನ್ ಶರ್ಮಾ ಹೇಳಿದಂತೆ, ಯಾವಾಗ ನಾವು ಒಂದು ಶಾಂತವಾದ ಪರಿಸರದಲ್ಲಿ ಏಕಾಂಗಿಯಾಗಿ ಕುಳಿತಿರುತ್ತೇವೋ,ಆಗ ಮನಸ್ಸು ತುಂಬಾ ಹಗುರವೆನಿಸುತ್ತದೆ. ಬಹಳಷ್ಟು ವೇಳೆ ಇಲ್ಲ ಸಲ್ಲದ ಆಲೋಚನೆಗಳು ನಮ್ಮ ಮನಸ್ಸನ್ನು ಹೊಕ್ಕಿ ಹೊರಬಿದ್ದು ಮತ್ತೆಲ್ಲೋ ಹೋಗಿ ಸೇರಿಬಿಡುತ್ತವೆ.ಅವಕ್ಕೆ ಗೊತ್ತು ಗುರಿಗಳಿಲ್ಲ. ಅವು ಎಲ್ಲಿ ಹುಟ್ಟಿಕೊಳ್ಳುತ್ತವೋ ತಿಳಿಯದು. ಒಂದಷ್ಟು ಕಠಿಣ ನಿರ್ಧಾರಗಳು ಇರಲೇಬೇಕು. ವಾಹಿನಿಯೊಂದು ಹರಿಯುವುದು ಅದರನ್ನು ಅವಲಂಬಿಸಿಯೇ. ಬಹಳಷ್ಟು ಚಿಕ್ಕ ಬದಲಾವಣೆಗಳು ಅಪರಿಮಿತ ಯಶಸ್ಸನ್ನು ತಂದುಕೊಡುವುದು.

ನಿಜ ಹೇಳಬೇಕೆಂದರೆ, ಕೆಲಸವೆಂಬುದು ಇಲ್ಲದಿದ್ದರೇನೆ, ಈ ತಲೆ ಎನ್ನುವುದು ಹತ್ತುಹಲವು ಆಲೋಚಿಸಿ ಗೊಬ್ಬರವಾಗಿಬಿಡುವುದು. ಇಲ್ಲಿ ಬಂದಮೇಲೆ ಕೆಲಸ ಮಾಡಲೇಬೇಕು. ನಾವೊಂದು ಇರುವೆಯಿರಲಿ, ಜೇನುನೊಣವಿರಲಿ ಅಥವಾ ಹಿಮಾಲಯದ ತಪ್ಪಲುಗಳಲ್ಲಿ ಕುಳಿತು ಧ್ಯಾನಿಸುತ್ತಿರುವ ಸಾಧು ಸಂತರಿರಲಿ, ನಮ್ಮನ್ನು ಒಂದಲ್ಲ ಒಂದರಲ್ಲಿ ತೊಡಗಿಸಿಕೊಂಡಿರಲೇಬೇಕು. ಆಲಸ್ಯವೆಂಬುದನ್ನು ಗೆಲ್ಲಲೇಬೇಕು. ಶರ್ಮಾ ಅವರು ಹೇಳಿದಂತೆ, ಆಲಸ್ಯವೆಂಬುದು ಸುಮೊ ಕುಸ್ತಿ ಪಟುವೊಬ್ಬ ಒಂದು ಆವಾಸದಲ್ಲಿ ಅಡಗಿ ಬಾಗಿಲಲ್ಲಿ ಹೆಬ್ಬಂಡೆಯೊಂದನ್ನು ಹಾಕಿಕೊಂಡಂತೆ. ಅದರಾಚೆಗಿನ ಉದ್ಯಾನವನದಲ್ಲಿ ಅರಳುತ್ತಿರುವ ಹೂವುಗಳ ಸೌಂದರ್ಯವನ್ನು ಆತ ಸವಿಯಲಾರ. ಅಲ್ಲಿ ಆಡುತ್ತಿರುವ ಮಕ್ಕಳ ಸಂತಸವನ್ನು ಅನುಭವಿಸಲಾರ. ಹೊರಗಿನ ಸೂರ್ಯೋದಯ, ಸೂರ್ಯಾಸ್ತದ ಹಿತವನ್ನು ಪಡೆಯಲಾರ. ಆದ್ದರಿಂದ ಆ ಹೆಬ್ಬಂಡೆಯೊಂದನ್ನು ಉರುಳಿಸಿ ಬದಿಗೊತ್ತುವುದು ಒಳಿತು. ನಾನೂ ನಿಮ್ಮ ಜೊತೆ ಪ್ರಯತ್ನಿಸುವೆ. 'The Monk Who Sold His Ferrari by Robin Sharma' ಖಂಡಿತ ಓದಲೇಬೇಕಾದ ಪುಸ್ತಕ. 

ಇತಿಹಾಸದಲ್ಲಿ, ನಾವು ಯಾವತ್ತೂ, ಪಂಗಡಗಳ ನಡುವೆ, ಧರ್ಮೀಯರ ನಡುವೆ, ಜ್ಞಾನ ಹಾಗೂ ಧರ್ಮಾಂಧತೆಯ ನಡುವೆ, ಸಾಂಪ್ರದಾಯಕತ್ವ ಹಾಗೂ ಆಧುನಿಕತೆಗಳ ನಡುವೆ ಯುದ್ಧವನ್ನು ಗಮನಿಸಿದ್ದೇವೆ. ಸತ್ಯವೇನು ಎನ್ನುವ ಕುತೂಹಲ ಎಲ್ಲರಿಗೂ ಬರುವಂತದ್ದೆ. ವಿಜ್ಞಾನವಿರಲಿ, ಧರ್ಮವಿರಲಿ ಅದರ ಮೂಲತತ್ವ ಸತ್ಯದ ಪರಿಶೋಧ. ಜನರ ಜೀವನ ಮಟ್ಟವನ್ನು ಮೇಲೆತ್ತುವುದು ಅದರ ಗುರಿ. ನೀವು ಇತಿಹಾಸದಲ್ಲಿ ಆಸಕ್ತಿಯುಳ್ಳವರಾಗಿದ್ದರೆ ಅಥವಾ ಬರಹಗಾರರೊಬ್ಬರ ಅಧ್ಬುತ ಸಾಮರ್ಥ್ಯವನ್ನು ಆಸ್ವಾದಿಸಬೇಕು ಎನ್ನುವುದಿದ್ದರೆ ಅಥವಾ ಯಾವುದೇ ಓರೆ ಪ್ರಭಾವಕ್ಕೆ ಒಳಗಾಗದೆ, ಇದು ಹೀಗೆ - ಇದು ಹೀಗೆ ಎನ್ನುವಂತಹ ಹಾಗೂ ಕನ್ನಡದ ಬರವಣಿಗೆ ಬೇಕು ಎನ್ನುವುದಾದರೆ 'ಎಸ್. ಎಲ್. ಭೈರಪ್ಪನವರ ಆವರಣವನ್ನು' ಓದಿ.

ಕೆಲವೊಂದು ಬರಹಗಾರರಿರುತ್ತಾರೆ. ಅವರ ಆಲೋಚನೆಗಳೆಂಬುದು ಪ್ರೌಢಿಮೆಯಿಂದ ಕೂಡಿದ್ದು, ಸರಳವಾದದ್ದು, ಹಿತವನ್ನು ಕೊಡುವಂತದ್ದು. ಹಾಗೆಯೇ ಓದುತ್ತಿದ್ದರೆ, ನಮ್ಮ ಪಕ್ಕದಲ್ಲೇ ಕುಳಿತು ನಮಗೊಂದು ಸಂತೃಪ್ತಿಯನ್ನು, ಆಪ್ತತೆಯನ್ನು, ಪ್ರೀತಿಯನ್ನು ತುಂಬುತ್ತದೆ. ಅಂತಹ ಪುಸ್ತಕ, 'The Alchemist by Paulo Coelho'. ಅದೊಂದು ನಮ್ಮದೇ ಮನೆಯಜ್ಜನ ಅಕ್ಕರೆ, ವಾತ್ಸಲ್ಯ ಹಾಗೂ ತತ್ವಶಾಸ್ತ್ರವೇ ಸರಿ. ಅಲ್ಲೊಂದು ಆನಂದವಿದೆ, ನಮಗೊಂದು ಹಿತವಿದೆ. ಸರಿ, ಎಲ್ಲಿಂದಲೋ ಆರಂಭಿಸಿ, ಎಲ್ಲೋ ಹೋಗಿ ತಲುಪಿದ್ದೇನೆ! ಮತ್ತೆ ಸಿಗೋಣ. ಅಲ್ಲಿ ತನಕ ಈ ಪುಸ್ತಕಗಳು ನಿಮಗಾಗಿ.

Saturday, December 21, 2013

ಕನಸುಗಳಿವೆ

      * ಜೀವನದಲ್ಲಿ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುವುದು ಕಷ್ಟ. ಅದರಲ್ಲೂ ಕೆಲವು ಸತ್ಯ ಸಂಗತಿಗಳನ್ನು ಹೇಳಿಕೊಳ್ಳುವುದು. ಅದಕ್ಕಿಂತಲೂ ಕಷ್ಟವಾದವು ಅದನ್ನು ಒಪ್ಪಿಕೊಳ್ಳುವುದು. $ ಹಲವು ನಕಾರಾತ್ಮಕ ಯೋಚನೆಗಳ ನಡುವೆ ಯಾವುದೋ ಒಂದು ಆಶಾಕಿರಣವೊಂದು ಹುಟ್ಟಿಕೊಳ್ಳುವುದು. # ಎಲ್ಲೋ ಒಂದು ಕಡೆ ಸಂಬಂಧಗಳು  ಹಳಿ ತಪ್ಪಿದಾಗ ಆತ್ಮಶೋಧನೆ ಎಂಬುದು ಹುಟ್ಟಿಕೊಳ್ಳುವುದು. @ ಎಲ್ಲೋ ಒಂದು ಕಡೆ ಸುಮ್ಮನೆ ಏಕಾಂತವನ್ನು ಅನುಭವಿಸಿದಾಗ ನಮ್ಮನ್ನು ನಾವೇ ವಿಶ್ಲೇಷಿಸಿಕೊಳ್ಳುವುದು. ತನ್ಮೂಲಕ ಯಾವುದೋ ಕಂಡರಿಯದ ರೂಪದಲ್ಲಿ ನಮ್ಮ ಚೈತನ್ಯವೆಂಬುದು ತುಂಬಿಕೊಳ್ಳುವುದು. &ಮನದ ಸುತ್ತೆಲ್ಲವೂ ಗದ್ದಲಗಳೇ ತುಂಬಿಕೊಂಡಿರುವಾಗ ನೆಮ್ಮದಿ, ಶಾಂತಿಯನ್ನು ಹುಡುಕಿಕೊಳ್ಳುವುದು. ನಮ್ಮ ತನವನ್ನು ಹಾಗೂ ತನುವನ್ನು ಕಾಯ್ದುಕೊಳ್ಳುವುದು. ಇದೆಲ್ಲ ಇದ್ದಲ್ಲಿ ನಾವು ಗಟ್ಟಿಗರು. ದೃಢರು.  ಈ ಸಾಲುಗಳನ್ನು ಬರೆಯುವಾಗ ನನ್ನಲ್ಲಿ ಹುಟ್ಟಿಬಂದ ಯೋಚನೆಗಳು ಹಲವಾರು.

       * ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ತಾನು ಉದ್ದೀಪನ ಮದ್ದು ಪಡೆದದ್ದು ನಿಜ ಎಂದು ಹೇಳಿಕೊಂದಿದ್ದು. ಇಡೀ ಜಗತ್ತೇ ನಿಮ್ಮನ್ನು ಗೌರವಿಸುತ್ತಿರುವಾಗ, ಹಲವಾರು ವ್ಯಕ್ತಿಗಳಿಗೆ ನೀವೊಂದು ಚೇತನವಾದಾಗ , ಇಲ್ಲ ನಾನು  ಮಾಡಿದ್ದು ತಪ್ಪು ಎಂದು ಹೇಳಿಕೊಳ್ಳುವುದು ಮಹಾನ್ ಗಟ್ಟಿಗತನವೇ ಸರಿ. ಆತ ಧೈರ್ಯಶಾಲಿ. ಅವನಿಗಾಗಿದ್ದ ಗೌರವ ಇನ್ನೊಂದು ತೂಕ ಹೆಚ್ಚಾಗಿತ್ತು. ಆ ಸಂದರ್ಭದಲ್ಲಿ ನೆನಪಾಗಿದ್ದು ಗಾಂಧೀಜಿಯವರು. 'ತಂದೆಯವರಲ್ಲಿ ತಾನೇ ಕದ್ದಿದ್ದೆ' ಎಂಬುದನ್ನು ಪತ್ರ ಮುಖೇನ ಹೇಳಿದ್ದರಲ್ಲ. ಮಾಡಿದ್ದನ್ನು ಒಪ್ಪಿಕೊಂಡಿದ್ದರಲ್ಲ. ನಾನು ಅಣ್ಣನಲ್ಲಿ ಹೇಳಿದ್ದೆ - ನಾನು ಮಾಡಿದ್ದೂ ತಪ್ಪು. ನನ್ನ ಶೈಕ್ಷಣಿಕ ಜೀವನದಲ್ಲಿ ಒಂದು ತಂತ್ರಜ್ಞಾನವನ್ನು ಸರಿಯಾಗಿ ಕಲಿಯಲಿಲ್ಲ. ಈಗ ಅದರ ಫಲವನ್ನು ಅನುಭವಿಸುತ್ತಿದ್ದೇನೆ ಎಂದೆ. ಬಂದ ಉತ್ತರ - "ಸರಿ, ಈಗ ಕಲಿತು ನೋಡು. ಕಲಿತು ನೀನು ಸಾಧಿಸಿದಾಗ ನಿನ್ನಲ್ಲುಂಟಾಗುವ ಸಂತೋಷವನ್ನು ಅನುಭವಿಸು" ಎಂದರು.

      $ ನಾನ್ಯಾವುದನ್ನು ನಕಾರಾತ್ಮಕಗಳು ಎನ್ನುತ್ತೇನೆ? ನಾವು, ನಮ್ಮ ಓರಗೆಯವರ ಯಶಸ್ಸನ್ನು ಕಂಡಾಗ ಅಸೂಯೆ ಪಡುವುದು. ನಮ್ಮೆದುರಲ್ಲೇ ನಮ್ಮ ಗೆಳೆಯರನ್ನೋ, ಪರಿಚಿತರನ್ನೋ ಮೂರನೇ ವ್ಯಕ್ತಿಗಳು ಹೊಗಳಿದಾಗ ನಮಗೆ ನಮ್ಮವರ ಬಗ್ಗೆ ಉಂಟಾಗುವ ಮತ್ಸರಗಳು, ನಮ್ಮನ್ನು ಉಳಿದವರು ಗುರುತಿಸುತ್ತಿಲ್ಲ ಎನ್ನುವ identity crisis ಗಳು.  ಇನ್ನೊಬ್ಬರಿಗೆ ಹೋಲಿಸಿಕೊಳ್ಳುವುದು. ಇವೆಲ್ಲವೂ ನಮ್ಮನ್ನು ಕುಗ್ಗಿಸುತ್ತವೆ. ಅದಕ್ಕೆ ನಾನು ಕಂಡುಕೊಂಡ ಉತ್ತರ - sport man's spirit. ರೋಜರ್ ಫೆಡರರ್ , ಪೀಟ್ ಸಾಂಪ್ರಾಸ್ ರನ್ನು ಸೋಲಿಸಿದಾಗ , ಸಾಂಪ್ರಾಸ್ ಯುಗ ಮುಗಿದು ಹೋಯಿತಾ? ಖಂಡಿತ ಇಲ್ಲ, ಈಗಲೂ ಸಾಂಪ್ರಾಸ್ ಟೆನಿಸ್ ಕ್ಷೇತ್ರ ಕಂಡ ಅಧ್ಬುತ ಆಟಗಾರರಲ್ಲೊಬ್ಬರು.  ತೆಂಡುಲ್ಕರ್ ಅವರನ್ನು ಹೊಗಳುತ್ತಿರುವಾಗ ದ್ರಾವಿಡ್ ಹೇಗೆ ಅನುಭವಿಸಿದ್ದಿರಬಹುದು? ಖಂಡಿತ ಅವರಿಬ್ಬರೂ ಅದ್ಭುತ ಆಟಗಾರರು. ನಾನು ತಂದೆಯವರಲ್ಲಿ ಹೇಳಿದ್ದೆ - ಅಪ್ಪ, ನಿನ್ನ ಮಗ ಉಳಿದವರಷ್ಟು ಬುದ್ಧಿವಂತನಲ್ಲ. ಅದಕ್ಕೆ ಎಲ್ಲರಂತೆಯೇ ನೌಕರಿಯನ್ನು ಮಾಡುತ್ತಿದ್ದಾನೆ ಎಂದೆ. ಅವರಂದರು - "ಕಳೆದ ನಲವತ್ತು ವರ್ಷಗಳಿಂದ ನಾನು ಕೃಷಿಯನ್ನು ಮಾಡುತ್ತಾ ಬಂದಿದ್ದೇನೆ. ನನ್ನ ಓರಗೆಯವರಂತೆ ನಾನೂ ಶ್ರೇಮಂತನಾಗಬೇಕು ಎಂದೆನಾ? ನಾನು ಕೊರಗಿದ್ದೀನಾ? ಖಂಡಿತ ಇಲ್ಲ!, ನಿಮ್ಮಿಬ್ಬರನ್ನೂ ಓದಿಸಿದ್ದೇನೆ. ಸಮಾಜದಲ್ಲಿ ನ್ಯಾಯಯುತ ಜೀವನ ನಡೆಸುವ ಮಾರ್ಗಕ್ಕೆ ನಿಮ್ಮನ್ನು ಕರೆದುಕೊಂಡು ಬಂದಿದ್ದೇನೆ. ಸತ್ಯ ಮಾರ್ಗದಲ್ಲಿ ನಡೆದಿದ್ದೇನೆ. ಸೋಲು, ಗೆಲುವು ಇದ್ದಿದ್ದೇ. ಏಳು-ಬೀಳು ಇದ್ದಿದ್ದೇ. ಕೊನೆಗೆ ಉಳಿಯೋದು: ಹೇಗೆ ನೀನು ಪ್ರತೀ ಸೋಲಿನ ನಂತರವೂ ಗೆದ್ದೆ, ಒಂದು ಗೆಲುವನ್ನು ನೋಡಲು ಎಷ್ಟು ಸೋಲನ್ನು ಕಂಡೆ, ಅದರ ಹಿಂದಿನ ಶ್ರಮ, ದುಡಿತ,ಸಾಧನೆಗಳು, ಜೊತೆಯಲ್ಲಿ ಇನ್ನೊಬ್ಬರೂ ಗೆದ್ದಾಗ ಹೇಗೆ ನೀನೂ ಅಭಿಮಾನದಿಂದ ಚಪ್ಪಾಳೆ ತಟ್ಟಿದೆ, ನಿನ್ನನ್ನು ನೀನು ಹೇಗೆ ಮೇಲೆತ್ತುಕೊಂಡು ಬಂದೆ.   ಹೀಗೆ  ನೀನು ನಡೆದುಕೊಂಡು ಬಂದ ಹಾದಿ. ಅಷ್ಟೇ ಇರುವುದು" ಎಂದರು.

     # ನಾವು ಎಷ್ಟರ ಮಟ್ಟಿಗೆ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಂಡು ಬಂದಿದ್ದೇವೆ? ಎಷ್ಟು ಸಂದರ್ಭಗಳಲ್ಲಿ ನಿಜವಾಗಿಯೂ ನಮ್ಮವರ ಬಗ್ಗೆ ನಮ್ಮವರೆಂಬ ಭಾವನೆ ತಳೆದಿದ್ದೇವೆ? ಎಷ್ಟು ಖಾಳಜಿ ವಹಿಸಿದ್ದೇವೆ? ಎಷ್ಟು ಮಿಡಿದಿದ್ದೇವೆ ? ಇನ್ನೊಬ್ಬರ ಕಷ್ಟಗಳಿಗೆ ಎಷ್ಟು ಸ್ಪಂದಿಸಿದ್ದೇವೆ? ಎಂಬುದು. ಹೀಗೆ ಗೆಳೆಯನಲ್ಲಿ  ಆಂಧ್ರದ ವಿಭಜನೆಯ ಬಗ್ಗೆ ಮಾತಾಡುತ್ತಿರುವಾಗ, ಆತನೆಂದ - ರಾಜಕೀಯ ಸಂಘರ್ಷದಲ್ಲಿ, ವಿದ್ಯಾರ್ಥಿಗಳು, ಯುವಕರು ಆತ್ಮಹತ್ಯೆ ಮಾಡಿಕೊಂಡರು. ಅವರ ಮನೆಯವರನ್ನು ನೋಡಿಕೊಳ್ಳುವವರು ಯಾರು? ತಂದೆ -ತಾಯಂದಿರಿಗೆ ಹೇಗಾಗಿರಬೇಡ? ಎಂದನು. ಹೌದಲ್ಲವೇ ನಮ್ಮ ತಂದೆ-ತಾಯಿಯರನ್ನು, ನಮ್ಮ ಮನೆಯನ್ನು ನೋಡಿಕೊಳ್ಳುವರು ನಾವೇ. ನಮ್ಮ ಮನೆ, ನಮ್ಮ ದೇಶ ಎನ್ನುವ ಭಾವನೆ ಇಲ್ಲದವರಿಂದ ಮತ್ತೇನನ್ನು ನಿರೀಕ್ಷಿಸಲಾದೀತು?  ಕನಸುಗಳಿವೆ -೧. ಜೀವನದಲ್ಲಿ ವೃದ್ಧಾಶ್ರಮವೊಂದನ್ನು ಕಟ್ಟಬೇಕು. ೨. ಹೋಟೆಲ್ಗಳಲ್ಲಿ ದುಡಿಯುವ, ಎಲ್ಲೋ ಟ್ರಾಫಿಕ್ ಗಳ ಮಧ್ಯೆ ಬಲೂನು ಮಾರುವ ಪೋರರಿಗೆ ಶಿಕ್ಷಣ ವ್ಯವಸ್ಥೆಯೊಂದನ್ನು ಕಲ್ಪಿಸಿಕೊಡಬೇಕು. ೩. ಪುರುಷನ ಅಗತ್ಯಗಳಿಗೆ ತನ್ನ ದೇಹವನ್ನು ಅರ್ಪಿಸಿದ ಸ್ತ್ರೀಯರೂ ಕೂಡ ಉಳಿದ ಸ್ತ್ರೀಯರಂತೆ ಸಮಾಜದ ಮೇರುವಾಹಿನಿಯಲ್ಲಿ ಬಾಳಬೇಕು. ತಮ್ಮ ತೀಟೆಗಳಿಗೆ, ಮಸ್ತಿ-ಮಜಾಗಳಿಗೆ ಬಳಸಿಕೊಂಡು, ನಂತರ ಸುಭಗರಂತೆ ಫೋಸು ಕೊಟ್ಟು ಬದುಕುವ ಪುರುಷರ ವಿರುದ್ಧ ಆಕ್ರೋಶವಿದೆ. ನೀವು ಗಂಡಸರೇ ಆದಲ್ಲಿ, ಜವಾಬ್ದಾರಿಯನ್ನು ತೆಗೆದುಕೊಂಡು, ಒಂದು ಮನೆಯನ್ನು ಕಟ್ಟಿ, ಕುಟುಂಬ ನಡೆಸಿ. ಅದರ ಬಿಟ್ಟು ಮೋಜು-ಮಸ್ತಿಗಳ ಹೆಸರಿನಲ್ಲಿ , ನಿಮ್ಮ ಅಗತ್ಯಗಳನ್ನು ತೀರಿಸಿಕೊಳ್ಳುವುದು ಬೇಡ. ಆ ಸ್ತ್ರೀಯರಿಗೊಂದು ಸಂಸ್ಥೆಯನ್ನು ಸ್ಠಾಪಿಸಬೇಕು.

    @ ಸ್ವಲ್ಪ ಸಮಯ ನಮಗೋಸ್ಕರ ಮೀಸಲಿಟ್ಟು, ನಮ್ಮ ನಡತೆಗಳನ್ನು, ನಾವು ಪ್ರತಿಸ್ಪಂದಿಸಿದ್ದನ್ನು, ನಮ್ಮ ಜವಾಬ್ದಾರಿಗಳನ್ನು ಅವಲೋಕಿಸುತ್ತೇವೆ. ಹೀಗಿದ್ದಾಗ ಎಲ್ಲೋ ಚೈತನ್ಯವೆಂಬುದು ನಮ್ಮನ್ನು  ತುಂಬಿಕೊಳ್ಳುತ್ತದೆ. ಯಾವುದೇ ಸ್ಥಿತಿಯಿರಲಿ ನಮ್ಮ ತನವನ್ನು , ನಮ್ಮ ಅದಮ್ಯ ಚೈತನ್ಯವನ್ನು ಮರೆಯಬಾರದು. ನಮ್ಮನ್ನೊಂದು ಅಪರಿಮಿತ ಉತ್ಸಾಹವೊಂದಕ್ಕೆ ತೆರೆದುಕೊಳ್ಳೋಣ. ಬೆಳೆಯೋಣ.

Monday, September 9, 2013

ನನ್ನ ಜೊತೆಗಿನ ಮಾತುಗಳು

       ಮತ್ತದೆ ಹಂಬಲದಿಂದ ಬರವಣಿಗೆಯನ್ನು ಆರಂಭಿಸಿರುವೆ . ಬರೋಬ್ಬರಿ ಒಂದು ವರ್ಷಗಳ ನಂತರ. ಇಷ್ಟು ದಿನಗಳಲ್ಲಿ ನನ್ನನ್ನು ನಾನು ಕಳೆದುಕೊಂಡ ಭಾವನೆಗಳನ್ನು ಆಗಾಗ್ಗೆ ಅನುಭವಿಸಿದ್ದೇನೆ. ಯಾವುದೋ ಊರು, ಯಾವುದೋ ಜನ . ಆರು ವರ್ಷಗಳ ನಂತರ ಮತ್ತೆ ಮೊದಲಿನಂತೆಯೇ ತಿರುವು. ಅವತ್ತು ಓದಿಗೋಸ್ಕರ ,ಇವತ್ತು ಉದ್ಯೋಗಕ್ಕೋಸ್ಕರ . ಬದುಕು ಸುಂದರ. ಏನನ್ನು ಬರೆಯಲಿಕ್ಕೆ ಹೊರಟಿದ್ದೇನೆ ತಿಳಿಯದು. ಯಾವುದೋ ಒಂದು ಓಘದಲ್ಲಿ ಜೀವನ ಸಾಗಿದೆ. ಅತ್ತ ಶೈಕ್ಷಣಿಕ ಕಲಿಕೆಯ ಮುಕ್ತಾಯ, ಇತ್ತ ಉದ್ಯೋಗ, ವೃತ್ತಿ ಜೀವನದ ಪ್ರಾರಂಭ. ಕಾಲೇಜು ಹುಡುಗರ ಒರಿಗೆಯಲ್ಲ, ಇತ್ತ ಕಂಪೆನಿಗೆ ಇನ್ನೂ ಫಸಲು ನೀಡುವ ಉದ್ಯೋಗಿಯಲ್ಲ. ಜೀವನ ಒಂದು ಹಂತದಲ್ಲಿ ಶೂನ್ಯದಿಂದ ಪ್ರಾರಂಭವಾಗಿದೆ. 
     
        ಎಲ್ಲವೂ ಅಸಂಘಟಿತ. ಮುಂದೆ ಏನು ಮಾಡುವುದು ಎಂಬ ಗುರಿಯಿಲ್ಲ. ಜೀವನಕ್ಕೆ ಒಂದು ಶಿಸ್ತುಬದ್ಧತೆಯಿಲ್ಲ. ಕಂಡಕಂಡಲ್ಲಿ ತಿರುಗಾಟ, ಕಂಡಕಂಡಲ್ಲಿ ಊಟ. ವಾರದ ದಿನಗಳಲ್ಲಿ ಹಗಲೋ ಇರುಳೋ, ಹೊರಗಡೆ ಬೆಳಕಿದೆಯೋ , ಬಿಸಿಲಿದೆಯೋ , ಗಾಳಿ ಇದೆಯೋ, ಮಳೆ ಇದೆಯೋ ಎಂಬ ಪರಿವೆಯೂ ಸಿಗದ ರೀತಿಯಲ್ಲಿ ದುಡಿತ. ವಾರದ ಕೊನೆಯ ಎರಡು ದಿನಗಳು ರಜಾ. ಆ ದಿನಗಳಲ್ಲಿ ಸಂಜೆಯಾಯಿತೆಂದರೆ ವ್ಯಾಪಾರ ಮಳಿಗೆಗಳ, mall ಗಳ ಸುತ್ತಾಟ. mallಗಳಲ್ಲಿ 'ಮಾಲು'ಗಳ ನೋಟ. ಜೀನ್ಸು ಧರಿಸಿ ಬಂದರೆ ಎದೆ ಮತ್ತು ಕುಂಡೆಗಳ ನೋಟ.   ಅವುಗಳ ಕಡೆಗೊಂದು ಅರ್ಥವಿಲ್ಲದ ಆಕರ್ಷಣೆ. In this age, i can say, they are juicy than milky. ಬಹುಶಃ ಸ್ವರ್ಗದಲ್ಲಿನ ರಂಭೆ, ಊರ್ವಶಿಯರು ಇವರ ಸೌಂದರ್ಯದ ಮುಂದೆ  ತಮ್ಮದೇನಿಲ್ಲ ಅನ್ನುತ್ತಿರುವರೇನೋ?!.. ನಮ್ಮದೊಂದು ಹರಿದ ಬಟ್ಟೆಯ ಜೀವನ. Life is unorganised with no aims and no hopes. ಮನದಲ್ಲೊಂದು ಕರ್ತೃತ್ವ ಶಕ್ತಿಯಿಲ್ಲ. ಕಟ್ಟುವ ಮನೋಭಾವನೆಯಿಲ್ಲ. ಮುನ್ನುಗ್ಗುವ  ಛಲವಿಲ್ಲ. A coward, ಧೈರ್ಯಶಾಲಿತ್ವವಿಲ್ಲ. ತಂತ್ರಜ್ಞಾನಗಳ ಮೇಲೆ ಹಿಡಿತವಿಲ್ಲ. Decent ಎಂದು ತೋರಿಸಿಕೊಳ್ಳುವ ಸೋಗಲಾಡಿತನ. There are no words like: inspiration, hard work and patience in my life. Why?


        Common, you poor fellow, just jump into water and swim. just walk on road. This is your life. You should fight for yourself. ನಾವು ನಮಗೋಸ್ಕರ ಹೋರಾಡಲೇಬೇಕು. ಬಡಿದಾಡಲೇಬೇಕು. ಯಾಕೆಂದರೆ ನಮ್ಮ ಜೊತೆ ಕೊನೆ ತನಕ ಇರುವವರು ನಾವೇ . It is only us will live forever with ourselves. ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು. ನಾನೇ ಇಲ್ಲಿ Boxer. I am the fighter and i am only the opponent. It is a fight within myself. Common, you fool, just get up and screw it.

        ಯಾವತ್ತೂ ನಿನಗೆ ನೀನು ಸಹಾನುಭೂತಿ ತೋರಿಸಬೇಡ. ಯೆ ದಿಲ್ ತೊ ಡರ್ಪ್ಹೋಕ್ ಹೈ, ಸಾಲಾ. It always searches for excuses. No, we should not let it to be like this. ತಗೋ ಒಂದು ಗುರಿಯನ್ನು. ಪ್ರೀತಿಸು ಮೊದಲು ನೀನು ನಿನ್ನನ್ನು. ನಿನ್ನ ಕರ್ತವ್ಯವನ್ನು. ಉತ್ಸಾಹವಿರಲಿ. ಚೈತನ್ಯವಿರಲಿ. ತಂದೆತಾಯಿಯರಲ್ಲಿ ಪ್ರೀತಿಯಿರಲಿ. ಸಮಾಜದ ಬಗ್ಗೆ , ನಿನ್ನ ಸಂಪ್ರದಾಯಗಳ ಬಗ್ಗೆ  ಪ್ರೀತಿಯಿರಲಿ,ಕಾಳಜಿಯಿರಲಿ, ಅಭಿಮಾನವಿರಲಿ. ನಿನ್ನ ಭವಿತವ್ಯದ ಕನಸುಗಳಿರಲಿ. ಅದನ್ನು ಸಾಕಾರಗೊಳಿಸುವ ಪ್ರಯತ್ನವಿರಲಿ. ಮೊದಲು ಕೆಲಸವ ಮಾಡು. ಈ ಜೀವನದಲ್ಲಿ ಶ್ರಮ ಹಾಗೂ ಶ್ರದ್ಧೆಯುತ ಕೆಲಸವಿಲ್ಲದೇ , ನಿನಗೇನೂ ದೊರೆಯದು. ಸಾಧನಾ ಮಾರ್ಗ ಬೇಕೇಬೇಕು. Common buddy, let's cheer up. ನಿನಗೋಸ್ಕರ ವೇಳೆಯನ್ನು ಕಾಯ್ದಿಡು. ನಿನ್ನ ಸ್ವಂತ ಪರಿಶ್ರಮವಿಲ್ಲದೆ ನಿನಗೇನೂ ದೊರೆಯದು. ನಿನ್ನ ಸಾಧನೆಯಲ್ಲದೇ ಇಲ್ಲಿ  ಮತ್ತೇನೂ ನಡೆಯದು. ಅದು ಸತ್ಯ. ಅದೇ ಈ ನಾಟಕ ರಂಗದ ಅನಿವಾರ್ಯ. ಅದೇ ಈ ಭೂಮಿ ನಮಗೆ ನೀಡಿರುವ ಒಂದು ಅದ್ಭುತ ಅವಕಾಶ. Inspire yourselves. Lift your ass up. Don't show any sympathy on yourselves. ಇದೊಂದು ಅದ್ಭುತ ಅವಕಾಶ. Unleash yourselves.     

Saturday, August 11, 2012

ಸಂದೇಶಪ್ರತಿಸಂದೇಶ


moon and the breeze
ಪ್ರಿಯೆ,
ನಿನ್ನ ಬರುವಿಕೆಗೆ ಇಂದು ನಾ ಕಾದಿರುವೆ
ಬರುವೆಯಾ? ಬಿಡುವೆಯಾ? ಎಂಬ ತೊಳಲಾಟ ಎನಗೆ.
ಮನಸ್ಸಿಂದು ನಾಲ್ಕು ಗೋಡೆಗಳ ಮಧ್ಯೆ ಸಿಲುಕಿದೆ
ಸ್ವಚ್ಛಂದ ಹಾರಾಟದ ಲಹರಿ ಕಾಣದೆ.

ನನ್ನ ಕನಸುಗಳ ಮೆರವಣಿಗೆ ನಡೆದಿದೆ
ನಿನ್ನ ರಥದಲ್ಲಿ ಕುಳಿಸಿಕೊಂಡು.
ಮನವು ಮುದಗೊಂಡು ನಿನ್ನ ಬಯಸುತಿದೆ
ಸೇರುವೆ ನಿನ್ನ ಒಲುಮೆಗಳೊಳಕ್ಕೆ.

ಹಸಿರ ಹಾಸಿನ ಮೇಲೆ ಕುಣಿದಾಡುವಾಸೆ
ನಿನ್ನ ಜೊತೆ ಸೇರಿ ಪಡೆಯಬೇಕೆಂಬ ನಿರಾಳತೆ.
ನನ್ನ ನಾ ಹರಿಬಿಟ್ಟಿರುವೆ ಸಲಿಲದಂತೆ
ನೀನೆಂಬ ಇಳೆಗೆ ತಂಪ ನೀಡುವಂತೆ

ಬೀಸುವ ಮಂದ ಮಾರುತವು ಸ್ಪರ್ಶಿಸಿದೆ
ತಂಪೆನಿಸಿದರೂ ನಾ ಪುಳಕಗೊಂಡಿರುವೆ.
ಹುಣ್ಣಿಮೆಯ ರಾತ್ರಿಯಲಿ ಎದ್ದಿರುವೆ ಬೆಳಕಲ್ಲಿ
ಬರುವೆಯಾ ನೀ ಎನ್ನ ಬಳಿಗೆ?

ಪ್ರಿಯಾ,
ನಿನ್ನ ಸಾಲುಗಳಲ್ಲಿ ನನ್ನ ಜೀವವಿದೆ
ಬರದಿರಲಾರೆನೆ ನಾ ನಿನ್ನ ಬಳಿಗೆ?
ನನ್ನ ಮನಸ್ಸಿಂದು ನಿನ್ನ ಬೇಡುತಿದೆ
ಸ್ವಚ್ಛಂದದ ಲಹರಿಯಲ್ಲಿ ನೀನೇ ನನ್ನಲ್ಲಿರುವೆ.

ನನ್ನ ಕನಸುಗಳ ಇರುವೆಲ್ಲ ನಿನ್ನಲ್ಲಿವೆ
ಸಾಕಾರಗೊಳಿಸುವೆಯಾ ನೀ ನನಗೆ?
ಮನದ ಭಾವಗಳು ತಟ್ಟನೆ ನೆನಪಿಸಿವೆ
ನನ್ನ ಒಲುಮೆಗಳೆಲ್ಲ ನಿನ್ನ ಮುದಕ್ಕೆ.

ನೀ ಕುಣಿದಾಡುವ ಹಸಿರಹಾಸಮೇಲೆ ಕಾದಿರುವೆ
ಪಾಲುದಾರಳಾಗಬೇಕೆಂಬುದು ನಿನ್ನ ನಿರಾಳತೆಗೆ.
ನಿನ್ನ ಸಲಿಲವನು ನಾನು ಕಾಯ್ದಿಡುವೆ
ನನ್ನ ಆಕಾಂಕ್ಷೆಗಳಿಗೆ ನಿನ್ನದೇ ಬಯಕೆ.

ಪ್ರತಿ ಮಾರುತದಲ್ಲೂ ಕಳಿಸಿರುವೆ ಸ್ಪರ್ಶವನು
ನಿನ್ನ ಪುಳಕಗಳೆಲ್ಲ ನನ್ನ ಇರುವಿಕೆಗೆ.
ಹುಣ್ಣಿಮೆಯ ರಾತ್ರಿಯಲಿ ಸೇರಿಹರು ಕೃಷ್ಣ-ರಾಧೆಯರು
ಬಂದಾಗ ಯಮುನಾ ತೀರದ ಬಳಿಗೆ.

Wednesday, June 20, 2012

ನಾನು ಮತ್ತು ನನ್ನದೆಂಬ ಅಹಮಿಕೆಯೂ

Following the footsteps of dad
  ಎಷ್ಟೋ ಮಥಿತ ಭಾವಗಳ ನಡುವೆ ಹೊಳಹು ಕಂಡಿದ್ದು ಒಂದೆ. ನಾನೇನಾಗಬೇಕು? ಎಂಬ ಪ್ರಶ್ನೆಗೆ ಉತ್ತರ ಹುಡುಕಿ ಗುರಿಯನ್ನು ರೂಪಿಸತೊಡಗಿದ್ದೆ. ನನ್ನ ಆದರ್ಶಗಳು ನನಗೆ ಮುಳುವಾಗುತ್ತಿವೆ ಎಂಬ ಭಯವು ಕಾಡುತ್ತಿದೆ. ಆದರೆ ಮನದಲ್ಲಿ ಸುಪ್ತ ಭಾವವೊಂದು ಹೇಳುತ್ತಿದೆ - ಆದರ್ಶಗಳ ಪಾಲನೆ ಕಷ್ಟ ನಿಜ, ಆದರೆ ಗೆಲುವು ನಿಶ್ಚಿತ. ಮನಸ್ಸು ಮತ್ತು ಮೆದುಳಿನ ನಡುವೆ ಯಾವುದೋ ಒಂದು filter ಇದೆ ಎಂದು ಭಾಸವಾಗುವುದು ನನಗೆ. ಏಕೆಂದರೆ ಮನಸ್ಸಿನ ಸತ್ಯವನ್ನು ಅದು ನನಗೆ ಹೇಳ ಬಿಡುತ್ತಿಲ್ಲ. ಎಲ್ಲೋ ಕೆಲವೊಮ್ಮೆ ಹಾಳು ವಿವೇಕವೊಂದು ವಿವೇಚಿಸುತ್ತಾ ನನ್ನನ್ನು ಅಧೀರನನ್ನಾಗಿಸುತ್ತದೆ.

  ಒಮ್ಮೊಮ್ಮೆ ಅನಿಸುವುದು ಯಾರಾದರ ಹತ್ತಿರ ಎಲ್ಲವನ್ನೂ ತೋಡಿಕೊಳ್ಳಲೆ? ನನ್ನ ದ್ವಂದ್ವ ನನ್ನ ತುಮುಲಗಳನ್ನು, ನನ್ನ ವಿಚಾರಗಳನ್ನು, ನನ್ನ ಕನಸುಗಳನ್ನು ಎಂದು. ಒಮ್ಮೆ ಅಪ್ಪ, ಒಮ್ಮೆ ಆಯಿ, ಒಮ್ಮೆ ಅಣ್ಣ, ಇನ್ನೊಮ್ಮೆ mentor , ಇನ್ನೊಮ್ಮೆ my friend ಎಲ್ಲ ನೆನಪಾಗುತ್ತಾರೆ. ಆದರೆ ಇವರ್‍ಯಾರ ಹತ್ತಿರವೂ ಬೇಡ ಎಂದು ಸುಮ್ಮನಿದ್ದುಬಿಡುತ್ತೇನೆ. ಎಷ್ಟೋ ಸಲ ನನ್ನ ಬರಹಗಳಲ್ಲಿ ಅವನ್ನೆಲ್ಲ ಅಡಗಿಸಿಟ್ಟಿರುತ್ತೇನೆ. ಇದರಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿ. ಎಷ್ಟೋ ಸಲ ಅದರ ಕುರಿತು ತುಂಬಾ ಅಲೋಚಿಸುತ್ತೇನೆ. ಕೊನೆಯಲ್ಲಿ ಇಂಗ್ಲಿಷಿನ If you want to learn swimming, then it is better to jump into the river than reading hundreds of books on swimming ಅನ್ನೊ ಮಾತು ನೆನಪಾಗಿ ಸುಮ್ಮನಿದ್ದುಬಿಡುತ್ತೇನೆ. If you want to do it, do it. If you want to say it, say it.

  ಒಂದು ನಿರ್ಧಾರಕ್ಕೆ ಬಂದಿರುವೆ. ಅಪ್ಪನ ಆದರ್ಶಗಳನ್ನು ಪಾಲಿಸೋದು. ಆತ ಹೇಳುತ್ತಾ ಇರುತ್ತಾನೆ ನಮ್ಮಲ್ಲಿ (ಅಣ್ಣ ಮತ್ತು ನಾನು), ಯಾವತ್ತೂ ಇನ್ನೊಬ್ಬರಿಗೆ ತೊಂದರೆಯಾಗದಂತೆ ನಡೆದುಕೊಳ್ಳಿ, ನಮ್ಮಿಂದಾಗಿ ಇತರರಿಗೆ ನೋವಾಗಬಾರದು. ನಿಮ್ಮ ಪಾಲಿನ ಕೆಲಸವನ್ನು ನೀವು ಮಾಡಿ. ಅವರು ಇವತ್ತಿಗೂ ಪಾಲಿಸಿದ್ದಾರೆ. So ನಾನೂ ಕೂಡ ಅವರ ಹಾದಿಯಲ್ಲೆ ಹೆಜ್ಜೆ ಇಡಬೇಕು.

  ಜೀವನದಲ್ಲಿ ನಿಮ್ಮ ಕನಸುಗಳ ಸಾಕಾರಕ್ಕಾಗಿ ದುಡಿಯಿರಿ ಎಂದು Randy Pausch ಹೇಳುತ್ತಾನೆ, ತನ್ನ The Last Lecture ಅಲ್ಲಿ. ಕೆಲವೊಮ್ಮೆ ನನಗೆ ಅನಿಸುವುದು, In Life everyone will not be lucky to start their life with chasing their dreams. They have to compromise at some point and then they have to start ಅಂತ.

  ಹಣ ಎಂಬುದು ಜೀವನದ ಅವಶ್ಯಕತೆ ತಾನೆ? ನಾವೇನೂ ವಿರಾಗಿಗಳಲ್ವಲ್ಲ, ಹಣ ನಶ್ವರ ಎನ್ನೋಕೆ? ಶ್ರೀಮಂತರಾದವರು ಹಣದ ಬಗ್ಗೆ ತತ್ವದ ಮಾತುಗಳನ್ನು ಹೇಳಬಹುದು. ಆದರೆ ಬಡವರಿಗೆ ಹಣ ನೆಮ್ಮದಿಯೆ ತಾನೆ? ಅದು ಬದುಕಿನ ವಾಸ್ತವ ಹಾಗೂ ವಿಪರ್‍ಯಾಸ. ಆದರೆ ನಾವು ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ಸಂಗತಿ ಎಂದರೆ,  "Money is a bad master and a good slave".  ಅದಕ್ಕಿಂತ ಹೆಚ್ಚಿನ ಯಾವ ಸ್ಥಾನವನ್ನೂ ಹಣಕ್ಕೆ ಕೊಡಲು ಸಾಧ್ಯವಿಲ್ಲ.  So ಮೊದಲು ಒಂದಿಷ್ಟು ಹಣ ಕೂಡಿಟ್ಟು ನಂತರ ನನ್ನ ಕನಸುಗಳ ಸಾಕಾರಕ್ಕಾಗಿ ದುಡಿಯಬೇಕು. ನೆಮ್ಮದಿಯ ಜೀವನವನ್ನು ಅನುಭವಿಸಬೇಕು. ಹೇಗೆಂದರೂ ನಮ್ಮ ಜೊತೆ ಅಪ್ಪನೋ, ಅಮ್ಮನೋ, ಸಹೋದರ/ರಿಯೋ, ಪತಿಯೋ/ಪತ್ನಿಯೋ, ಆಪ್ತ ಗೆಳೆಯನೋ/ಗೆಳತಿಯೋ ಅಥವಾ ಇನ್ಯಾರೋ ಇರುತ್ತಾರಲ್ಲ. ಒಮ್ಮೆ ಇವರ್‍ಯಾರೂ ಇಲ್ಲ ಎಂದಿಟ್ಟುಕೊಳ್ಳಿ ( ಯಾರೂ ಇಲ್ಲದಿರುವುದು ಒಮ್ಮೊಮ್ಮೆ ವಾಸ್ತವವೆ ) "ನಮ್ಮದಕ್ಕೆ ನಾವೇ ಇದ್ದೀವಲ್ಲ" ಅಲ್ವಾ? Accept the life as it comes. Share Love.