ಎಲ್ಲೋ ಕಳೆದು ಹೋದ ಬರಹಗಾರನ ಬೆನ್ನಟ್ಟಿ ಓಡುತ್ತಿದ್ದೆ. ಪ್ರತಿದಿನವೂ ಸಂಕಟಗಳು, ಅಕ್ಷರಗಳೆಲ್ಲೋ ಮರೆಯಾಯಿತೆಂಬ ಭೀತಿ. ಸೃಜನಶೀಲ ವ್ಯಕ್ತಿಯೊಬ್ಬ ಅಲ್ಲೆಲ್ಲೋ ಮರೆಯಾದ ಛಾಯೆ. ಓಡಲಾಗದ ಕೈಗಳು. ಕನ್ನಡದ ಸೊಬಗನ್ನು ಮರೆತಿದ್ದೆನಾ?! ಇಲ್ಲ! ಮತ್ತೆ ಬರೆಯಬೇಕೆಂಬ ಬಯಕೆ. ಸರಿ, ಬರೆದೇ ಬಿಡೋಣ.
ಜಗತ್ತೆಂಬುದು ಯಶಸ್ಸು, ಹಣ, ಅಧಿಕಾರ ಎಂಬುದರ ಹಿಂದೆ ಓಡುತ್ತಿದ್ದರೆ, ಮನಸ್ಸೆಂಬುದು ಶಾಂತಿ, ತೃಪ್ತಿಯ ಕಡೆ ವಾಲುತ್ತಿದೆ. ಅದನ್ನು ಉತ್ಕಟವಾಗಿ ಅಪೇಕ್ಷಿಸುತ್ತಿದೆ. ಎಲ್ಲೊ ನಿಸರ್ಗದ ಮಡಿಲಲ್ಲಿ , ಈ ಭೂರಮೆಯ ಸೇವೆ ಮಾಡುತ್ತ, ಅವಳ ಅಂದ , ಅವಳ ಗಾಂಭೀರ್ಯ , ಅವಳ ಮೃದುತ್ವ , ಅವಳ ಕಠೋರತನವನ್ನು ಹತ್ತಿರದಿಂದ ನೋಡುತ್ತ ಕಳೆದು ಹೋಗಬೇಕೆಂಬ ಬಯಕೆ. ಬಳಸುವ ನೀರಿಗೆ, ತಿನ್ನುವ ಅನ್ನಕ್ಕೆ ಆಗಲೇ ಹಣವ ಕಟ್ಟುತ್ತಿರುವ ನಾವು, ಉಸಿರಾಡುವ ಗಾಳಿಗೂ ಹಣ ಕೊಡುವ ಸಂದರ್ಭ ಬರುವುದರೊಳಗೆ , ಆ ಧರಿತ್ರಿಯ ಮಗುವಾಗಿರಬೇಕು. ಏಕೆಂದರೆ ಯಾವ ನಾಯಕರೂ , ಯಾವ ಸಾಮಾನ್ಯ ಮನುಷ್ಯರು ಕೂಡ, ಪ್ರಕೃತಿ ಸದ್ದಿಲ್ಲದೇ ತನ್ನೊಳಗೆ ತಾನು ಬದಲಾಗುತ್ತಿರುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮಳೆ ಆಗುತ್ತಿಲ್ಲ. ಮುಂಗಾರು ಮಳೆಯ ಅಬ್ಬರವಿಲ್ಲ. ಉಷ್ಣವೆಂಬುದು ಜಾಸ್ತಿ. ದಿನನಿತ್ಯ ನಮ್ಮ ಜಂಜಾಟಗಳಲ್ಲೆ ಕಳೆದು ಹೋಗಿರುವ ನಾವು ಗಮನಿಸುತ್ತಿದ್ದೀವಾ? ಮುಂದಿನ ದಿನಗಳಲ್ಲಿ ಮನುಕುಲವು ಹೋರಾಟ ಮಾಡಬೇಕಾಗಿರುವುದು ಭಯೋತ್ಪಾದನೆಯ ವಿಷಯಕ್ಕಲ್ಲ, ಭ್ರಷ್ಟಾಚಾರ ವಿಷಯಕ್ಕೂ ಅಲ್ಲ. ತಮ್ಮ ಧರ್ಮ ಮೇಲು , ಪರಧರ್ಮ ಕೀಳು ಎಂಬ ವಿಷಯಕ್ಕೂ ಅಲ್ಲ. ಹಣ, ಅಂತಸ್ತು, ಐಶ್ವರ್ಯಗಳಿಗಂತಲೂ ಅಲ್ಲವೇ ಅಲ್ಲ. ಕೇವಲ ನಮ್ಮ ಅಸ್ತಿತ್ವಕ್ಕೆ . ಕುಡಿಯುವ ನೀರಿಗೆ ಹಾಗೂ ತಿನ್ನುವ ಅನ್ನಕ್ಕೆ.
ಬಳಸುವ ನೀರಿಗೆ ಹೇಗೆ ಕೊರತೆ ಎಂದರೆ ಅರ್ಥವಾಗಿರಬಹುದು. ಅರಣ್ಯ ನಾಶ ಹಾಗೂ ಮಳೆಯ ಅಭಾವ. ಇರುವ ಕಾಡನ್ನು ಕಡಿದು , ಇರುವ ಕೆರೆಗಳ ಅತಿಕ್ರಮಿಸಿ , ಜಲ ಮೂಲಗಳ ಮೇಲೆ ಕಾಂಕ್ರೀಟು ಜಂಗಲ್ಲುಗಳು ತಲೆ ಎತ್ತುತ್ತಿವೆ. ಯಾವ ಪುರುಷಾರ್ಥಕ್ಕೆ? ಯಾರ ಬೊಕ್ಕಸಕ್ಕೆ? ಯಾವನದೋ ಬ್ಯಾಂಕ್ ಖಾತೆಗೆ, ಇನ್ಯಾರದೋ ಪೂರ್ತಿ ಖಾಂದಾನು ಕುಳಿತು ತಿನ್ನುವುದಕ್ಕೆ. ನಾವಾದರೋ, ನಮ್ಮ ಮನೆ ಚೆನ್ನಾಗಿದ್ದರೆ ಆಯಿತು, ಪಕ್ಕದ ಮನೆ ಹೊತ್ತಿ ಉರಿದರೆ ನಮಗೇನು ಧಾಡಿ ಎನ್ನುವವರು.
ತಿನ್ನುವ ಆಹಾರಕ್ಕೆ ಕೊರತೆ ಹೇಗೆ ಗೊತ್ತಾ? ಹೇಗೆಂದರೆ ಬೆಳೆಯುವವರೇ ಇಲ್ಲ! ಬೆಳೆ ಬೆಳೆಯಲಿಕ್ಕೆ ಹೋದರೆ ನೂರಾರು ಕಷ್ಟಗಳು. ಮಳೆಯ ಅಭಾವ, ಕೂಲಿ ಕಾರ್ಮಿಕರ ಅಭಾವ. ಕೆಲಸ ಮಾಡುವುದು ಯಾರಿಗೂ ಬೇಕಿಲ್ಲ. ಇಂದಿನ ಜನರಿಗೆ ಏನೂ ಬೇಡ. ಎಲ್ಲರಿಗು ಒಳ್ಳೆಯ ವಸ್ತ್ರ ಧರಿಸಿ, ಶ್ರೀಮಂತಿಕೆಯ ಕಾರಲ್ಲಿ ಓಡಾಡಿ, ತಮ್ಮದನ್ನು ಎಲ್ಲರಿಗೂ ತೋರಿಸಿಕೊಂಡು , ಉದ್ದವಾಗಿ ರಸ್ತೆಯಲ್ಲಿ ಮೇಲಿಂದ ಕೆಳಗೆ ಓಡಾಡಿ ಬಿಟ್ಟರೆ ಮುಗಿಯಿತು. ನಗರ ಜೀವನದ ಆಕರ್ಷಣೆ. ಹೋಗಲಿ ಬಿಡಿ, ನೀವೇನೋ ಆದರ್ಶವಾದಿಗಳು , ತೋಟಗಳಿಗೆ ಹೋಗಿ , ಭಗೀರಥ ಪ್ರಯತ್ನ ಪಟ್ಟು ದುಡಿದು ಬೆಲೆ ಸಂಪಾದಿಸಿರೆಂದಿಟ್ಟುಕೊಳ್ಳೋಣ, ನೀವು ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ಕೇಳುವವರಿಲ್ಲ. ಇದರರ್ಥ , ಆ ಬೆಳೆಗೆ ಡಿಮಾಂಡ್ ಇಲ್ಲವೆಂದೇನಲ್ಲ! ಈ ಮಧ್ಯವರ್ತಿಗಳು ಅದರ ಬೆಲೆಯನ್ನೆ, ಅದರ ಮೌಲ್ಯವನ್ನೇ ಬೆಳೆದವನಿಗೆ ತೋರಿಸಲ್ಲ. ಬೆಳೆದವನಿಗೆ ಸಿಕ್ಕಿದ್ದು ಸೀರುಂಡೆಯೆ. ಆದರೆ ಅದೇ ಬೆಳೆಯನ್ನು ನೀವು ಖರೀದಿಸಿ ನೋಡಿ , ಅದರ ಮೌಲ್ಯ ದುಪ್ಪಟ್ಟಾಗಿರುತ್ತದೆ. ಆತನ ಅಂಗಡಿ ಬಾಡಿಗೆಯಿಂದ ಹಿಡಿದು , ಎಲ್ಲ ತೆರಿಗೆಗಳನ್ನು ಸೇರಿಸಿ ನೀವು ಖರೀದಿಸಬೇಕಾಗುತ್ತದೆ. ಬೆಳೆದವನ ಜೇಬಲ್ಲೂ ಇಲ್ಲ, ಕೊಂಡವನ ಜೇಬಲ್ಲೂ ಇಲ್ಲ. ಯಾಕೆಂದರೆ ಆ ಮಧ್ಯವರ್ತಿಯ ಲಾಭದಾಸೆ ಇನ್ನೂ ಪೂರೈಸಿಲ್ಲ.
ನೀವು ಬಗೆ ಹರಿಸುತ್ತೀರಾ? ನಾನು ಬಗೆ ಹರಿಸಲಾ? ಸರಕಾರ ಬಗೆ ಹರಿಸುತ್ತಾ? ಏ! ಇರಲಿ ಬಿಡಿ! ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ಡೊಂಕುಗಳನ್ನು ಸರಿ ಮಾಡಿಕೊಳ್ಳಿ ಅನ್ನುತ್ತೀರಾ? ಬೇಡ, ಇದನ್ನು ಬಗೆ ಹರಿಸೋಣ. Let's solve, let's work for better of this mankind. ಉತ್ಸಾಹಿಯಾಗೋಣ. ಎಲ್ಲರ ಮನೆಯ ಬಟ್ಟಲಲ್ಲೂ ನೆಮ್ಮದಿಯ ಊಟವಿರಲಿ . ಏನನ್ನುತ್ತೀರ?