![]() |
| Following the footsteps of dad |
ಎಷ್ಟೋ ಮಥಿತ ಭಾವಗಳ ನಡುವೆ ಹೊಳಹು ಕಂಡಿದ್ದು ಒಂದೆ. ನಾನೇನಾಗಬೇಕು? ಎಂಬ ಪ್ರಶ್ನೆಗೆ ಉತ್ತರ ಹುಡುಕಿ ಗುರಿಯನ್ನು ರೂಪಿಸತೊಡಗಿದ್ದೆ. ನನ್ನ ಆದರ್ಶಗಳು ನನಗೆ ಮುಳುವಾಗುತ್ತಿವೆ ಎಂಬ ಭಯವು ಕಾಡುತ್ತಿದೆ. ಆದರೆ ಮನದಲ್ಲಿ ಸುಪ್ತ ಭಾವವೊಂದು ಹೇಳುತ್ತಿದೆ - ಆದರ್ಶಗಳ ಪಾಲನೆ ಕಷ್ಟ ನಿಜ, ಆದರೆ ಗೆಲುವು ನಿಶ್ಚಿತ. ಮನಸ್ಸು ಮತ್ತು ಮೆದುಳಿನ ನಡುವೆ ಯಾವುದೋ ಒಂದು filter ಇದೆ ಎಂದು ಭಾಸವಾಗುವುದು ನನಗೆ. ಏಕೆಂದರೆ ಮನಸ್ಸಿನ ಸತ್ಯವನ್ನು ಅದು ನನಗೆ ಹೇಳ ಬಿಡುತ್ತಿಲ್ಲ. ಎಲ್ಲೋ ಕೆಲವೊಮ್ಮೆ ಹಾಳು ವಿವೇಕವೊಂದು ವಿವೇಚಿಸುತ್ತಾ ನನ್ನನ್ನು ಅಧೀರನನ್ನಾಗಿಸುತ್ತದೆ.
ಒಮ್ಮೊಮ್ಮೆ ಅನಿಸುವುದು ಯಾರಾದರ ಹತ್ತಿರ ಎಲ್ಲವನ್ನೂ ತೋಡಿಕೊಳ್ಳಲೆ? ನನ್ನ ದ್ವಂದ್ವ ನನ್ನ ತುಮುಲಗಳನ್ನು, ನನ್ನ ವಿಚಾರಗಳನ್ನು, ನನ್ನ ಕನಸುಗಳನ್ನು ಎಂದು. ಒಮ್ಮೆ ಅಪ್ಪ, ಒಮ್ಮೆ ಆಯಿ, ಒಮ್ಮೆ ಅಣ್ಣ, ಇನ್ನೊಮ್ಮೆ mentor , ಇನ್ನೊಮ್ಮೆ my friend ಎಲ್ಲ ನೆನಪಾಗುತ್ತಾರೆ. ಆದರೆ ಇವರ್ಯಾರ ಹತ್ತಿರವೂ ಬೇಡ ಎಂದು ಸುಮ್ಮನಿದ್ದುಬಿಡುತ್ತೇನೆ. ಎಷ್ಟೋ ಸಲ ನನ್ನ ಬರಹಗಳಲ್ಲಿ ಅವನ್ನೆಲ್ಲ ಅಡಗಿಸಿಟ್ಟಿರುತ್ತೇನೆ. ಇದರಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿ. ಎಷ್ಟೋ ಸಲ ಅದರ ಕುರಿತು ತುಂಬಾ ಅಲೋಚಿಸುತ್ತೇನೆ. ಕೊನೆಯಲ್ಲಿ ಇಂಗ್ಲಿಷಿನ If you want to learn swimming, then it is better to jump into the river than reading hundreds of books on swimming ಅನ್ನೊ ಮಾತು ನೆನಪಾಗಿ ಸುಮ್ಮನಿದ್ದುಬಿಡುತ್ತೇನೆ. If you want to do it, do it. If you want to say it, say it.
ಒಂದು ನಿರ್ಧಾರಕ್ಕೆ ಬಂದಿರುವೆ. ಅಪ್ಪನ ಆದರ್ಶಗಳನ್ನು ಪಾಲಿಸೋದು. ಆತ ಹೇಳುತ್ತಾ ಇರುತ್ತಾನೆ ನಮ್ಮಲ್ಲಿ (ಅಣ್ಣ ಮತ್ತು ನಾನು), ಯಾವತ್ತೂ ಇನ್ನೊಬ್ಬರಿಗೆ ತೊಂದರೆಯಾಗದಂತೆ ನಡೆದುಕೊಳ್ಳಿ, ನಮ್ಮಿಂದಾಗಿ ಇತರರಿಗೆ ನೋವಾಗಬಾರದು. ನಿಮ್ಮ ಪಾಲಿನ ಕೆಲಸವನ್ನು ನೀವು ಮಾಡಿ. ಅವರು ಇವತ್ತಿಗೂ ಪಾಲಿಸಿದ್ದಾರೆ. So ನಾನೂ ಕೂಡ ಅವರ ಹಾದಿಯಲ್ಲೆ ಹೆಜ್ಜೆ ಇಡಬೇಕು.
ಜೀವನದಲ್ಲಿ ನಿಮ್ಮ ಕನಸುಗಳ ಸಾಕಾರಕ್ಕಾಗಿ ದುಡಿಯಿರಿ ಎಂದು Randy Pausch ಹೇಳುತ್ತಾನೆ, ತನ್ನ The Last Lecture ಅಲ್ಲಿ. ಕೆಲವೊಮ್ಮೆ ನನಗೆ ಅನಿಸುವುದು, In Life everyone will not be lucky to start their life with chasing their dreams. They have to compromise at some point and then they have to start ಅಂತ.
ಹಣ ಎಂಬುದು ಜೀವನದ ಅವಶ್ಯಕತೆ ತಾನೆ? ನಾವೇನೂ ವಿರಾಗಿಗಳಲ್ವಲ್ಲ, ಹಣ ನಶ್ವರ ಎನ್ನೋಕೆ? ಶ್ರೀಮಂತರಾದವರು ಹಣದ ಬಗ್ಗೆ ತತ್ವದ ಮಾತುಗಳನ್ನು ಹೇಳಬಹುದು. ಆದರೆ ಬಡವರಿಗೆ ಹಣ ನೆಮ್ಮದಿಯೆ ತಾನೆ? ಅದು ಬದುಕಿನ ವಾಸ್ತವ ಹಾಗೂ ವಿಪರ್ಯಾಸ. ಆದರೆ ನಾವು ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ಸಂಗತಿ ಎಂದರೆ, "Money is a bad master and a good slave". ಅದಕ್ಕಿಂತ ಹೆಚ್ಚಿನ ಯಾವ ಸ್ಥಾನವನ್ನೂ ಹಣಕ್ಕೆ ಕೊಡಲು ಸಾಧ್ಯವಿಲ್ಲ. So ಮೊದಲು ಒಂದಿಷ್ಟು ಹಣ ಕೂಡಿಟ್ಟು ನಂತರ ನನ್ನ ಕನಸುಗಳ ಸಾಕಾರಕ್ಕಾಗಿ ದುಡಿಯಬೇಕು. ನೆಮ್ಮದಿಯ ಜೀವನವನ್ನು ಅನುಭವಿಸಬೇಕು. ಹೇಗೆಂದರೂ ನಮ್ಮ ಜೊತೆ ಅಪ್ಪನೋ, ಅಮ್ಮನೋ, ಸಹೋದರ/ರಿಯೋ, ಪತಿಯೋ/ಪತ್ನಿಯೋ, ಆಪ್ತ ಗೆಳೆಯನೋ/ಗೆಳತಿಯೋ ಅಥವಾ ಇನ್ಯಾರೋ ಇರುತ್ತಾರಲ್ಲ. ಒಮ್ಮೆ ಇವರ್ಯಾರೂ ಇಲ್ಲ ಎಂದಿಟ್ಟುಕೊಳ್ಳಿ ( ಯಾರೂ ಇಲ್ಲದಿರುವುದು ಒಮ್ಮೊಮ್ಮೆ ವಾಸ್ತವವೆ ) "ನಮ್ಮದಕ್ಕೆ ನಾವೇ ಇದ್ದೀವಲ್ಲ" ಅಲ್ವಾ? Accept the life as it comes. Share Love.

Sorry to all. the browsers( i think os compatibility) are not supporting "Rya" kannada character. example- vipaRyaasa, ivaRyaaroo. Baraha 7.0 version.
ReplyDeleteGood decision made... Keep it up, and wish you achieve all Goals and Dreams of your life....
ReplyDeleteYup,Hope all goes well...
Delete